ಇಷ್ಟದ ಚಿತ್ರ ತ್ರಿವರ್ಣಗಳು: ಕೆ೦ಪು(ಥ್ರೀ ಕಲರ್ಸ್: ರೆಡ್)
ಎಲ್ಲೆಲ್ಲೂ ಕೆ೦ಪು ಬಣ್ಣ ಕ್ರೋಧ, ತೃಷ್ಣೆ, ಇ೦ದ್ರಿಯಲೋಲುಪದ ಸ೦ಕೇತವಾಗಿ ತೋರಿ ತೆರೆ ತೂರಿ ಕಣ್ಣಿಗೆ ಇರಿಯುತ್ತದೆ.
ಬಣ್ನಗಳೇ ಮಾತಾಗುತ್ತವೆ. ಕಥೆಯಾಗುತ್ತವೆ. ಕಥೆಯ ಮುಖ್ಯ ಪಾತ್ರವಾಗುತ್ತವೆ.
ಬೇರೆಯವರ ಸ್ವ೦ತ ಕ್ಷಣಗಳು, ಅ೦ತರ೦ಗದಲ್ಲಿ ಗೋಪ್ಯ ಹ೦ಚಿಕೊಳ್ಳಲಾಗದ ಮುಜುಗರದ, ಅಪರಾಧಿ ಮನೋಭಾವನೆಗಳಿದ್ದರೂ ಮನುಷ್ಯರೆಲ್ಲರೂ ಹೊರಗಿನ ಪ್ರಪ೦ಚದಲ್ಲಿ ಒ೦ದು ಎನ್ನೋ ವಿಚಿತ್ರ ಭಾವನೆ.
ಕ್ರಿಸ್ತೊಫ್ ಕಿಸ್ಲೊವ್ಸ್ಕಿಯ ಕಡೆಯ ಚಿತ್ರ. ಈ ಮೇರು ಚಿತ್ರ ಬಿಡುಗಡೆಯ ಕೂಡಲೇ ನಿವೃತ್ತಿ ಘೋಷಿಸಿ ಕೆಲವೇ ತಿ೦ಗಳುಗಳಲ್ಲಿ ಇಹಲೋಕ ತ್ಯಜಿಸಿದ್ದು ವಿಚಿತ್ರ.