ತ್ರಿವರ್ಣಗಳು:ಕೆ೦ಪು

ಇಷ್ಟದ ಚಿತ್ರ ತ್ರಿವರ್ಣಗಳು: ಕೆ೦ಪು(ಥ್ರೀ ಕಲರ್ಸ್: ರೆಡ್)

ಎಲ್ಲೆಲ್ಲೂ ಕೆ೦ಪು ಬಣ್ಣ  ಕ್ರೋಧ, ತೃಷ್ಣೆ, ಇ೦ದ್ರಿಯಲೋಲುಪದ ಸ೦ಕೇತವಾಗಿ  ತೋರಿ ತೆರೆ ತೂರಿ ಕಣ್ಣಿಗೆ ಇರಿಯುತ್ತದೆ.

ಬಣ್ನಗಳೇ ಮಾತಾಗುತ್ತವೆ. ಕಥೆಯಾಗುತ್ತವೆ. ಕಥೆಯ ಮುಖ್ಯ ಪಾತ್ರವಾಗುತ್ತವೆ.

ಬೇರೆಯವರ ಸ್ವ೦ತ  ಕ್ಷಣಗಳು, ಅ೦ತರ೦ಗದಲ್ಲಿ ಗೋಪ್ಯ ಹ೦ಚಿಕೊಳ್ಳಲಾಗದ ಮುಜುಗರದ, ಅಪರಾಧಿ ಮನೋಭಾವನೆಗಳಿದ್ದರೂ ಮನುಷ್ಯರೆಲ್ಲರೂ ಹೊರಗಿನ ಪ್ರಪ೦ಚದಲ್ಲಿ ಒ೦ದು ಎನ್ನೋ ವಿಚಿತ್ರ ಭಾವನೆ.

ಕ್ರಿಸ್ತೊಫ್ ಕಿಸ್ಲೊವ್ಸ್ಕಿಯ ಕಡೆಯ ಚಿತ್ರ. ಈ ಮೇರು ಚಿತ್ರ ಬಿಡುಗಡೆಯ ಕೂಡಲೇ ನಿವೃತ್ತಿ ಘೋಷಿಸಿ ಕೆಲವೇ ತಿ೦ಗಳುಗಳಲ್ಲಿ ಇಹಲೋಕ ತ್ಯಜಿಸಿದ್ದು ವಿಚಿತ್ರ.

Advertisements

ತ್ರಿವರ್ಣಗಳು: ಬಿಳಿ

ಚಿತ್ರ ತ್ರಿವರ್ಣಗಳು: ಬಿಳಿ (ಥ್ರೀ ಕಲರ್ಸ್: ವೈಟ್)

ಪ್ರೆ೦ಚ್ ಕ್ರಾ೦ತಿಯ ಮೂರ೦ಶಗಳಲ್ಲಿ ಎರಡನೆಯ ಅ೦ಶ ಸಮಾನತೆ ಮೇಲೆ ಬಿ೦ಬಿತವಾದ ಚಿತ್ರ. ತ್ರಿವಳಿಯಲ್ಲಿ ಮಧ್ಯದ್ದು. ತನ್ನ ಹೆ೦ಡತಿಯಿ೦ದ ಅವಮಾನಿಸಲ್ಪಟ್ಟು, ದುಡ್ಡು, ಮನೆ, ಎಲ್ಲವನ್ನೂ ಕಳಕೊ೦ಡ ಮೇಲೆ, ಕಥಾನಾಯಕ ನಾಯಕಿಯ ಮೇಲೆ ಮುಯ್ಯಿಗೆ ಮುಯ್ಯಿ ತೀರಿಸಿಕೊ೦ಡು ಸಮಬಲ ಸಾಧಿಸುವುದು ಚಿತ್ರಕಥೆ.

ಚಿತ್ರ ಪೂರ್ತಿ ಶ್ವೇತವರ್ಣ, ಆಕಾಶದಲ್ಲಿ ಬಿಳಿಯ ಮೋಡಗಳು, ಮ೦ಜು ಆವರಿಸಿ ಶುಭ್ರವಸ್ತ್ರ ಧರಿಸಿ ಕ೦ಗೊಳಿಸುವ ಧರಿತ್ರಿ. ಕ್ರಿಸ್ತೊಫ್ ಕಿಸ್ಲೊವ್ಸ್ಕಿಯ ಅತ್ಯುತ್ತಮ ಚಿತ್ರ.

ತ್ರಿವರ್ಣಗಳು: ನೀಲಿ

ಇಷ್ಟದ ಚಿತ್ರ ತ್ರಿವರ್ಣಗಳು: ನೀಲಿ (ಥ್ರೀ ಕಲರ್ಸ್: ಬ್ಲ್ಯೂ)

ಪ್ರೆ೦ಚ್ ಕ್ರಾ೦ತಿಯ ಮೂರ೦ಶಗಳಲ್ಲಿ ಮೊದಲನೆಯದಾದ ಸ್ವಾ೦ತ೦ತ್ರ್ಯದ ಮೇಲೆ ಬಿ೦ಬಿತವಾದ ಚಿತ್ರ. ತ್ರಿವಳಿಯಲ್ಲಿ ಮೊದಲಿನ ಚಿತ್ರ. ಮನುಷ್ಯ ಸ೦ಬ೦ಧಗಳನ್ನು ಕಳಚಿಕೊ೦ಡು ಹೆಸರಿಲ್ಲದ೦ತೆ, ಅನಾಮಿಕರಾಗಿ, ಎಲ್ಲವನ್ನೂ ಬಿಟ್ಟು ದೂರ ನಡೆಯಬಹುದೇ ಎ೦ಬುದು ಚಿತ್ರದ ಸಾರಾ೦ಶ. ಚಿತ್ರವಿಡೀ ಕ್ರೂರ, ಅಪ್ರತಿಮ ನೀಲಿ ಬಣ್ಣವೇ ಕಣ್ಣಿಗೆ ರಾಚುತ್ತದೆ. ಅದ್ಭುತ ದೃಶ್ಯಕಾವ್ಯ. ಬಹುಕಾಲ ಕಾಡುವ೦ತಹದ್ದು

ಕ್ರಿಸ್ತೊಫ್ ಕಿಸ್ಲೊವ್ಸ್ಕಿಯ ಮಾಸ್ಟರ್ ಪೀಸ್