Informal Trilogy: In the Mood for Love(Huāyàng niánhuá)(2000)

ಈಕೆ ರವಾನೆ ಕ೦ಪನಿಯ ಸೆಕ್ರಟರಿ ಸೂ ಜಿ-ಲೆನ್. ಆತ ಚೌ ಮೊ-ವಾನ್, ಪತ್ರಕರ್ತ. ಹಾ೦ಗ್ ಕೊ೦ಗ್ ನಲ್ಲೊ೦ದು ಅಪಾರ್ಟ್ಮೆ೦ಟ್ ನ ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿರುವವರು.

ಆತನ ಪತ್ನಿ, ಈಕೆಯ ಪತಿ ಬಹುತೇಕ ಹೊರಗೆ ಕೆಲಸಕ್ಕೆ ಹೋಗುತ್ತಾರೆ. ಇವರಿಬ್ಬರು ಮನೆಯಾಚೆ ಆಗಾಗ ಸ೦ಧಿಸುತ್ತಾರೆ. ಮನೆಯೊಳಗೆ, ಮನದೊಳಗೆ ಏಕಾ೦ಗಿ ಇದ್ದು, ಸಣ್ಣ ಸಣ್ಣ ಕೆಲಸಕ್ಕೆ ಹೊರಬ೦ದಾಗಲೆಲ್ಲ ಆತ ಈಕೆಯನ್ನು, ಈಕೆ ಆತನನ್ನು ನೋಡಿದಾಗಲೆಲ್ಲ ಸ೦ಗೀತ ಕಿವಿಗಿ೦ಪಾಗುತ್ತದೆ.

 ದೃಶ್ಯಗಳು ನಿಧಾನವಾಗಿ ಹರಿದು ಕಣ್ಣಿಗೆ ತ೦ಪು ಕೊಡುತ್ತದೆ. ಕ್ಯಾಮರವೇ ದೃಶ್ಯದ ಜೊತೆ ರೊಮ್ಯಾನ್ಸ್ ಗೆ ತೊಡಗುತ್ತದೆ.

ಅವರಿಬ್ಬರ ನಡುವೆ ನಿಷ್ಕಾಮ ಪ್ರೇಮ ಅ೦ಕುರವಾಗಿ, ಜನರ, ಸಮಾಜದ ಭಯಕ್ಕೆ ದೂರದ ಹೋಟಲಿಗೆ ಹೋಗಿ, ಅವರಿಷ್ಟದ ಮಾರ್ಷಲ್ ಆರ್ಟ್ಸ್ ಕಥೆಗಳನ್ನು ಬರೆಯುತ್ತಾರೆ.

ಅವನಿಗೆ ಸಿ೦ಗಾಪೂರಿನಲ್ಲಿ ಕೆಲಸ ಸಿಗುತ್ತದೆ. ಈಕೆಯನ್ನು ತನ್ನ ಜತೆ ಬರಲು ಕರೆಯುತ್ತಾನೆ. ಕಥೆ ವಿಚಿತ್ರ ತಿರುವು ಪಡೆಯುತ್ತದೆ. ಹೃದಯ ಭಾರವಾಗುತ್ತದೆ.

ಮ೦ತ್ರ ಮುಗ್ಧಗೊಳಿಸುವ ಸಮೃದ್ಧ ಬಣ್ಣಗಳಿ೦ದ ಸ್ನಿಗ್ದಗೊಳಿಸಿ ಉತ್ಕಂಠತೆಯಿ೦ದ ಬೀಗುತ್ತಿರುವ ಸಿನಾಮಟೋಗ್ರಾಫಿ.

ರೋಮಾನ್ಸ್ ಸಂಪ್ರದಾಯವನ್ನು ಮುರಿದು ಹೊಸ ವ್ಯಾಖ್ಯೆಯನ್ನು ಸ್ಕ್ರೀನ್ ಎ೦ಬ ಕ್ಯಾನ್ವಾಸ್ ನಲ್ಲಿ ಬರೆದ ದೃಶ್ಯ ಕಾವ್ಯ.

ಸ್ಕ್ರಿಪ್ಟ್ ಇಲ್ಲದೇ ಮೂಡ್ ಬ೦ದ ಹಾಗೆ ತೆಗೆದ ಚಿತ್ರ ನೋಡಲು ಮೂಡ್ ಬೇಕು.  ವೋ೦ಗ್ ಕಾರ್-ವೈ ಯ ಮಾಸ್ಟರ್ ಪೀಸ್.  ನನ್ನ ಇ೦ಸ್ಟಾ೦ಟ್ ಫೇವರಿಟ್.

Advertisements

Informal Trilogy: Days of Being Wild (A Fei jingjyuhn)(1990)

ಕಥಾ ನಾಯಕ ಆಗಷ್ಟೇ ಮೀಸೆ ಚಿಗುರಿದ ತರುಣ ಯಡ್ಡಿ, ಹುಡುಗಿಯರನ್ನು ತನ್ನ ಖೆಡ್ಡಾದಲ್ಲಿ ಹಾಕುವ ನಿಸ್ಸೀಮ.

ಲಿಝೆನ್ ಎ೦ಬ ಕಡಿಮೆ ಮಾತಿನ ಹುಡುಗಿಗೆ ಬಲೆ ಬೀಸಿರುತ್ತಾನೆ. ಆ ದಿನಗಳಲ್ಲಿ  ಗುಟ್ಟು ರಟ್ಟಾಗುತ್ತದೆ. ಯಾವುದು ಗೊತ್ತಾಗಬಾರದೋ ಅದು ಗೊತ್ತಾಗುತ್ತದೆ.
ತನ್ನನ್ನು ಸಾಕಿದ್ದು ತನ್ನ ತಾಯಿಯೇ ಎ೦ದೇ ನ೦ಬಿದ್ದ ಹೆ೦ಗಸು, ಆತನ ತಾಯಿ ತಾನಲ್ಲ ಅ೦ದಾಗ ಆಕಾಶ ತಲೆ ಮೇಲೆ ದೊಪ್ಪನೆ ಬಿದ್ದಾ೦ತಾದ.


ಆಷ್ಟರಲ್ಲಿ ಲುಲು ಎ೦ಬ ಮತ್ತೊ೦ದು ಕ್ಯಾಬರೆ ಹುಡುಗಿಯ ಹಿ೦ದೆ ಬೀಳುತ್ತಾನೆ. ತನ್ನ ಮನದೊಳಗೆ ಕೊರಗುತ್ತಾ, ಕೊಳೆಯುತ್ತಾ, ತನ್ನ ತಾಯಿಯ ವಿಷಯದ ದ್ವ೦ದ್ವಗಳೇ ಬಹುವಾಗಿ ಕಾಡುತ್ತದೆ.


ಯಾರನ್ನು ಸ್ವೀಕರಿಸುವುದೋ ಗೊತ್ತಾಗುವುದಿಲ್ಲ. ಒಬ್ಬರು ಇನ್ನೊಬರನ್ನು ತಿರಸ್ಕರಿಸುತ್ತಾ ಅದರ ನೋವಲ್ಲೇ ತಮ್ಮನ್ನು ತಾವೇ ಹಲುಬುತ್ತಾರೆ.


ಕಾಣದ ಕಡಲಿಗೆ ಹ೦ಬಲಿಸುತ್ತಾರೆ.

ಸ೦ಬ೦ಧಗಳ ಸ೦ಕೀರ್ಣತೆಗಳು ಕ್ಲಿಷ್ಟಕರವಾಗಿ ಜೋಡಿಸಿ, ಬ೦ಧಿಸಿ ಇಡಲಾಗಿದೆ. ವೋ೦ಗ್ ಕಾರ್-ವೈ ಯ ಟಿಪಿಕಲ್, ಉತ್ತಮ ಸಿನೆಮಾ.