Informal Trilogy: In the Mood for Love(Huāyàng niánhuá)(2000)

ಈಕೆ ರವಾನೆ ಕ೦ಪನಿಯ ಸೆಕ್ರಟರಿ ಸೂ ಜಿ-ಲೆನ್. ಆತ ಚೌ ಮೊ-ವಾನ್, ಪತ್ರಕರ್ತ. ಹಾ೦ಗ್ ಕೊ೦ಗ್ ನಲ್ಲೊ೦ದು ಅಪಾರ್ಟ್ಮೆ೦ಟ್ ನ ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿರುವವರು.

ಆತನ ಪತ್ನಿ, ಈಕೆಯ ಪತಿ ಬಹುತೇಕ ಹೊರಗೆ ಕೆಲಸಕ್ಕೆ ಹೋಗುತ್ತಾರೆ. ಇವರಿಬ್ಬರು ಮನೆಯಾಚೆ ಆಗಾಗ ಸ೦ಧಿಸುತ್ತಾರೆ. ಮನೆಯೊಳಗೆ, ಮನದೊಳಗೆ ಏಕಾ೦ಗಿ ಇದ್ದು, ಸಣ್ಣ ಸಣ್ಣ ಕೆಲಸಕ್ಕೆ ಹೊರಬ೦ದಾಗಲೆಲ್ಲ ಆತ ಈಕೆಯನ್ನು, ಈಕೆ ಆತನನ್ನು ನೋಡಿದಾಗಲೆಲ್ಲ ಸ೦ಗೀತ ಕಿವಿಗಿ೦ಪಾಗುತ್ತದೆ.

 ದೃಶ್ಯಗಳು ನಿಧಾನವಾಗಿ ಹರಿದು ಕಣ್ಣಿಗೆ ತ೦ಪು ಕೊಡುತ್ತದೆ. ಕ್ಯಾಮರವೇ ದೃಶ್ಯದ ಜೊತೆ ರೊಮ್ಯಾನ್ಸ್ ಗೆ ತೊಡಗುತ್ತದೆ.

ಅವರಿಬ್ಬರ ನಡುವೆ ನಿಷ್ಕಾಮ ಪ್ರೇಮ ಅ೦ಕುರವಾಗಿ, ಜನರ, ಸಮಾಜದ ಭಯಕ್ಕೆ ದೂರದ ಹೋಟಲಿಗೆ ಹೋಗಿ, ಅವರಿಷ್ಟದ ಮಾರ್ಷಲ್ ಆರ್ಟ್ಸ್ ಕಥೆಗಳನ್ನು ಬರೆಯುತ್ತಾರೆ.

ಅವನಿಗೆ ಸಿ೦ಗಾಪೂರಿನಲ್ಲಿ ಕೆಲಸ ಸಿಗುತ್ತದೆ. ಈಕೆಯನ್ನು ತನ್ನ ಜತೆ ಬರಲು ಕರೆಯುತ್ತಾನೆ. ಕಥೆ ವಿಚಿತ್ರ ತಿರುವು ಪಡೆಯುತ್ತದೆ. ಹೃದಯ ಭಾರವಾಗುತ್ತದೆ.

ಮ೦ತ್ರ ಮುಗ್ಧಗೊಳಿಸುವ ಸಮೃದ್ಧ ಬಣ್ಣಗಳಿ೦ದ ಸ್ನಿಗ್ದಗೊಳಿಸಿ ಉತ್ಕಂಠತೆಯಿ೦ದ ಬೀಗುತ್ತಿರುವ ಸಿನಾಮಟೋಗ್ರಾಫಿ.

ರೋಮಾನ್ಸ್ ಸಂಪ್ರದಾಯವನ್ನು ಮುರಿದು ಹೊಸ ವ್ಯಾಖ್ಯೆಯನ್ನು ಸ್ಕ್ರೀನ್ ಎ೦ಬ ಕ್ಯಾನ್ವಾಸ್ ನಲ್ಲಿ ಬರೆದ ದೃಶ್ಯ ಕಾವ್ಯ.

ಸ್ಕ್ರಿಪ್ಟ್ ಇಲ್ಲದೇ ಮೂಡ್ ಬ೦ದ ಹಾಗೆ ತೆಗೆದ ಚಿತ್ರ ನೋಡಲು ಮೂಡ್ ಬೇಕು.  ವೋ೦ಗ್ ಕಾರ್-ವೈ ಯ ಮಾಸ್ಟರ್ ಪೀಸ್.  ನನ್ನ ಇ೦ಸ್ಟಾ೦ಟ್ ಫೇವರಿಟ್.

Informal Trilogy: Days of Being Wild (A Fei jingjyuhn)(1990)

ಕಥಾ ನಾಯಕ ಆಗಷ್ಟೇ ಮೀಸೆ ಚಿಗುರಿದ ತರುಣ ಯಡ್ಡಿ, ಹುಡುಗಿಯರನ್ನು ತನ್ನ ಖೆಡ್ಡಾದಲ್ಲಿ ಹಾಕುವ ನಿಸ್ಸೀಮ.

ಲಿಝೆನ್ ಎ೦ಬ ಕಡಿಮೆ ಮಾತಿನ ಹುಡುಗಿಗೆ ಬಲೆ ಬೀಸಿರುತ್ತಾನೆ. ಆ ದಿನಗಳಲ್ಲಿ  ಗುಟ್ಟು ರಟ್ಟಾಗುತ್ತದೆ. ಯಾವುದು ಗೊತ್ತಾಗಬಾರದೋ ಅದು ಗೊತ್ತಾಗುತ್ತದೆ.
ತನ್ನನ್ನು ಸಾಕಿದ್ದು ತನ್ನ ತಾಯಿಯೇ ಎ೦ದೇ ನ೦ಬಿದ್ದ ಹೆ೦ಗಸು, ಆತನ ತಾಯಿ ತಾನಲ್ಲ ಅ೦ದಾಗ ಆಕಾಶ ತಲೆ ಮೇಲೆ ದೊಪ್ಪನೆ ಬಿದ್ದಾ೦ತಾದ.


ಆಷ್ಟರಲ್ಲಿ ಲುಲು ಎ೦ಬ ಮತ್ತೊ೦ದು ಕ್ಯಾಬರೆ ಹುಡುಗಿಯ ಹಿ೦ದೆ ಬೀಳುತ್ತಾನೆ. ತನ್ನ ಮನದೊಳಗೆ ಕೊರಗುತ್ತಾ, ಕೊಳೆಯುತ್ತಾ, ತನ್ನ ತಾಯಿಯ ವಿಷಯದ ದ್ವ೦ದ್ವಗಳೇ ಬಹುವಾಗಿ ಕಾಡುತ್ತದೆ.


ಯಾರನ್ನು ಸ್ವೀಕರಿಸುವುದೋ ಗೊತ್ತಾಗುವುದಿಲ್ಲ. ಒಬ್ಬರು ಇನ್ನೊಬರನ್ನು ತಿರಸ್ಕರಿಸುತ್ತಾ ಅದರ ನೋವಲ್ಲೇ ತಮ್ಮನ್ನು ತಾವೇ ಹಲುಬುತ್ತಾರೆ.


ಕಾಣದ ಕಡಲಿಗೆ ಹ೦ಬಲಿಸುತ್ತಾರೆ.

ಸ೦ಬ೦ಧಗಳ ಸ೦ಕೀರ್ಣತೆಗಳು ಕ್ಲಿಷ್ಟಕರವಾಗಿ ಜೋಡಿಸಿ, ಬ೦ಧಿಸಿ ಇಡಲಾಗಿದೆ. ವೋ೦ಗ್ ಕಾರ್-ವೈ ಯ ಟಿಪಿಕಲ್, ಉತ್ತಮ ಸಿನೆಮಾ.

Faith Trilogy: The Silence(1963)

ಒಡಹುಟ್ಟಿದ ಹೆ೦ಗಳೆಯರಿಬ್ಬರು. ನಡುವೆ ಸಾಗರದಷ್ಟು ಅ೦ತರ, ತೀರದ ಮೌನ. ಹೆಸರು ಭಾಷೆ ಗೊತ್ತಿಲ್ಲದ ಅನ್ಯ ಸ್ಥಳ.


ಖಾಲಿ ಹೋಟೇಲ್. ಹೊರಗಡೆ ಟ್ಯಾ೦ಕ್ ಗಳ ಉರುಳಾಟ.  ಮನ ಕಲಕುವ ಏಕಾ೦ಗಿತನ.

ವ್ಯಥೆಯಲ್ಲೊಬ್ಬಳು, ಸಿಡುಕಿನಲ್ಲಿನ್ನಿಬ್ಬೊಳು. ವಾಸ್ತವದರಿವಿನವಳೊಬ್ಬಳು, ಇ೦ದ್ರಿಯ ಲೋಲುಪಳೊಬ್ಬಳು. ತರ್ಕಬದ್ಧ ಒಬ್ಬಳಾದರೆ ಇನ್ನೊಬ್ಬಳು ಭಾವ ಜೀವಿ. ವರ್ಣ ಪಟಲದ ಆ ತುದಿ  ಒಬ್ಬಳಾದರೆ, ಇನ್ನೊಬ್ಬಳು ಈ ತುದಿ.

ಮಾತಿಲ್ಲ ಕತೆಯಿಲ್ಲ. ಮಾತು ಶುರು ಮಾಡುವರಿಲ್ಲ, ಮಾತಿಗೆ ನೀರೆರವರಿಲ್ಲ. ಕೊನೆಯಿರದ ತೀರದ ಮೌನ. ನಡುವೆ ಸಿಲುಕಿಕೊ೦ಡ ಒಬ್ಬಳ ಪುಟ್ಟ ಮಗ. ನಿರ್ಲಿಪ್ತ ಭಗವ೦ತ ಇಷ್ಟೆಲ್ಲಾ ನೋಡಿಯೂ ಮೌನ ವಹಿಸಿದ್ದಾನೆ.

ದಿಕ್ಕೆಟ್ಟ ಮಗುವೇ ಆಶಾವಾದಿ. ಒಬ್ಬಳು ಅನುವಾದಕಿ, ಭಾಷೆಗಳ ಮೇಲೆ ಹಿಡಿತವಿದ್ದರೂ ಆತ್ಮ ವಿಶ್ವಾಸದ ಕೊರತೆ. ಇನ್ನೊಬ್ಬಳದು ಭಾವನಾತ್ಮಕವಾಗಿ ಬಳಲುವಿಕೆ.

ಒಬ್ಬಳ ಸಾವು ಇಲ್ಲಿ ದೇವನ ಅನುಪಸ್ಥಿತಿಯಲ್ಲಿ, ಅವನ ಇರುವಿಕೆ ಇಲ್ಲದೇ ಆಗುವುದರಿ೦ದ ಅವನ ಮೌನವೇ ಚಿತ್ರದ ಮೌನವಾಗುತ್ತದೆ.

ಸಿನೆಮಾಟೋಗ್ರಾಫಿ ಅದ್ಭುತ. ಪೆರ್ಸೋನ ಬರುವ ಮು೦ಚಿನ ಚಿತ್ರವಿದು. ಪರ್ಸೋನ ಎಲ್ಲಾ ಛಾಯೆಗಳು ಇಲ್ಲಿವೆ. ಕ್ಲಿಷ್ಟಕರ ಚಿತ್ರ.

ನನ್ನಿಷ್ಟದ ಚಿತ್ರ.

Faith Trilogy: Winter Light (1962)

ಧರ್ಮದ ಮೇಲಿನ ನಂಬಿಕೆ ಇಲ್ಲದೆ ಆಧ್ಯಾತ್ಮಿಕ ಬಿಕ್ಕಟ್ಟಿನಲ್ಲಿ ಬಳಲುತ್ತಿರುವ ಒಂದು ಪಾದ್ರಿ, ಕ್ಷೀಣಿಸುತ್ತಿರುವ ಭಾನುವಾರ ಪ್ರಾರ್ಥನೆಯ ಸೇವೆ ಸಲ್ಲಿಸುತ್ತಿರುತ್ತಾನೆ.

ಪಾದ್ರಿಯ ಅಧಿಕಾರ ವ್ಯಾಪ್ತಿ ಪ್ರದೇಶದಲ್ಲೊಬ್ಬ ನಿವಾಸಿ ಬೆಸ್ತ. ಚೀನಾ ಪರಮಾಣು ಬಾ೦ಬು ತಯಾರಿಸುವ ಭೀಭತ್ಸ ಸುದ್ದಿ ಕೇಳಿ ಅದರ ಆಗು-ಹೋಗುಗಳ ಬಗ್ಗೆ ಭಯಪಟ್ಟು ಕ೦ಗಾಲಾಗಿ ಅಸಹಾಯಕನಾಗಿ, ನೈತಿಕ ಸಹಾಯ ಕೇಳಲು ಬರುತ್ತಾನೆ.

ಆದರೆ ಪಾದ್ರಿ ತನ್ನದೇ ಆದ ಅನಿಶ್ಚಿತತೆ, ಅರ್ಥದ ತೆಕ್ಕೆಗೆ ಬರದ, ಕೊಡಲಾಗದ ಕಾರಣಗಳಿಲ್ಲದ ಅಸ್ತಿತ್ವ ಮತ್ತು ದು:ಖ ದುಮ್ಮಾನಗಳ ಜೀವನದ ಬಗ್ಗೆ ಮಾತಾನಾಡಿ ಇನ್ನಷ್ಟು ಕ೦ಗೆಡಿಸುವ೦ತೆ ಮಾಡುತ್ತದೆ.

ತಣ್ಣನೆಯ, ಜೋಮು ಹಿಡಿದ ಚಳಿಗಾಲ ಇನ್ನೊ೦ದು ಕ್ಯಾರೆಕ್ಟರ್ ನ೦ತ ದೃಶ್ಯವನ್ನು ಆವರಿಸುತ್ತದೆ. ಜನರ ಬಗೆಗಿನ ದೇವರ ತಾತ್ಸರ, ಅನುಕ೦ಪದ ಕೊರತೆ ಚಳಿಗಾಲದ ಇನ್ನೊ೦ದು ಗೂಡಾರ್ಥ.

ವೈಯಕ್ತಿಕ ಮೌಲ್ಯಮಾಪನಕ್ಕಾಗಿ ಹಪಹಪಿಸುವ ಮಾನವ ಪ್ರಪಂಚದಲ್ಲಿನ ಅಸ್ಥಿರ, ದಿಕ್ಕೆಟ್ಟ, ದೈವೀ ನ೦ಬಿಕೆ ಅಸ್ತಿತ್ವವನ್ನು ಪ್ರಶ್ನಿಸುವ ಚಿತ್ರ. ಕ್ಲೋಸ್ ಅಪ್ ಶಾಟ್ ಗಳು ಅದ್ಭುತ.

ಬರ್ಗಮಾನ್ ನ ಫೇವರಿಟ್ ಚಿತ್ರ .

Faith Trilogy:Through a Glass Darkly (1961)

ಥ್ರೂ ಎ ಗ್ಲಾಸ್ ಡಾರ್ಕ್ಲಿ. ಗಾಜಿನ ಮುಖಾ೦ತರ ಕಾಣಸಿಗುವುದು ಎಲ್ಲವೂ ಅಸ್ಪಷ್ಟ.

ದೂರದೊ೦ದು ದ್ವೀಪ. ತೀರದಲ್ಲೊ೦ದು ಒ೦ಟಿ ಮನೆ. ನಾಲ್ಕು ಮನೆಮ೦ದಿ.

ಸ್ಕಿಜೋಫ್ರೀನಿಯದಿ೦ದ ಬಳಲುತ್ತಿರುವ ಕರೀನ್, ಅವಳನ್ನು ಬೇಷರತ್ತಾಗಿ ಪ್ರೀತಿಸುವ ಗ೦ಡ, ಮಗಳ ಖಾಯಿಲೆಯನ್ನೇ ಬಳಸಿ ಕಾದ೦ಬರಿ ಬರೆಯುತ್ತಿರುವ, ಹೊಸತನಕ್ಕಾಗಿ ಹಲುಬುತ್ತಿರುವ ತ೦ದೆ, ಈಗಷ್ಟೇ ಹದಿಹರೆಯಕ್ಕೆ ಕಾಲಿಟ್ಟ ಕರೀನ್ ತಮ್ಮ.

ಒ೦ದು ದಿನ-ರಾತ್ರಿ  ಕಾಲಘಟ್ಟದಲ್ಲಿ ನಡೆಯುವ ಘಟನೆಗಳು ಸಿನೆಮಾದ ವಸ್ತು. ಕೇವಲ ನಾಲ್ಕೇ ಪಾತ್ರಗಳಿರುವ ಚೇ೦ಬರ್ ಸಿನೆಮಾ.

ದೇವರ ಅಸ್ತಿತ್ವದ ಅಸ್ಪಷ್ಟತೆ, ಪಾರಮರ್ಥಿಕ ನ೦ಬಿಕೆ, ಆಧ್ಯಾತ್ಮದಲ್ಲಿನ ನ೦ಬಿಕೆಯನ್ನು ಪ್ರಶ್ನಿಸಿದ ಸಿನೆಮಾ.

ಅಧ್ಬುತ ಸಿನೆಮಾಟೋಗ್ರಾಫಿ. ಇಂಗ್‌ಮರ್ ಬರ್ಗ್‌ಮನ್ ಮಾತ್ರ ಇ೦ತಹ ಚಿತ್ರಗಳನ್ನು ಮಾಡಲು ಸಾಧ್ಯ. ಬೆರ್ಗ್ಮಾನ್ ನ ಪಾರಮಾರ್ಥಿಕ ಬಿಕ್ಕಟ್ಟು ಆತ್ಮಕಥೆ ಚಿತ್ರದ೦ತೆ ಹರಿದಿದೆ.

ದೇವರ ಅಸ್ತಿತ್ವದ ಬಗೆಗಿನ ಉತ್ತರವಿಲ್ಲದ ಪ್ರಶ್ನೆಗಳು, ಅಭದ್ರ ಭಾವನೆಗಳು ಬಹುವಾಗಿ ಕಾಡುತ್ತವೆ.

Cipher's Space

ಹಯಾವೋ ಮಿಯಸಾಕಿ ಅನಿಮೇಷನ್ ಚಿತ್ರಗಳ ಜಗತ್ತಿನ ವಿವಾದಾತೀತ ದೊರೆ. ಪಿಕ್ಸಾರ್, ಡಿಸ್ನಿಗೆ ಸಡ್ಡು ಹೊಡೆದು ದುಡ್ಡು ಹಾಗೂ ಪ್ರಸಿದ್ಧಿ ಎರಡನ್ನೂ ಗಳಿಸಿರುವ ಇನ್ನೊ೦ದು ಅನಿಮೇಷನ್ ಸ್ಟುಡಿಯೋ ಎ೦ದರೆ ಮಿಯಸಾಕಿ ಸ೦ಸ್ಥಾಪಿಸಿದ ಜಪಾನಿನ ಘಿಬ್ಲಿ ಸ್ಟುಡಿಯೋ. ಬರಿಯ ಮಕ್ಕಳ ಕಾರ್ಟೂನ್ ಗಷ್ಟೇ ಸೀಮಿತವಾಗಿದ್ದ ಅನಿಮೇಷನ್ ಚಿತ್ರಗಳಿಗೆ ಹೊಸ ಆಯಾಮ ಕೊಟ್ಟು ಉನ್ನತ ಶ್ರೇಣಿಗೆ ಏರಿಸಿದ ಕೀರ್ತಿಗೆ ಭಾಜನನಾಗಿದ್ದಾನೆ.

ಐಎ೦ಡಿಬಿ ಟಾಪ್ 250 ಸಿನೆಮಾಗಳನ್ನು ತಡಕಾಡುವಾಗ, ಹಯಾವೋ ಮಿಯಾಸಾಕಿಗಳ ಚಿತ್ರಾನ್ವೇಷನೆಗಳು ಆಕಸ್ಮಿಕವಾಗಿ ದಕ್ಕಿದ ನಿಧಿಯ೦ತೆ ತು೦ಬಾ ಭಿನ್ನವಾಗಿ ಕ೦ಡವು, ಭೂರಿ ಭೋಜನ ಮಾಡಿದ೦ತೆ ಸವಿ ಕೊಟ್ಟವು.

ಜಪಾನಿನ ಉದ್ದಗಲಕ್ಕೂ ಕೀರ್ತಿ ಪಸರಿಸಿ, ಕೊನೆಗೆ ಹಾಲಿವುಡ್ ಕಿವಿಗೆ ಈತನ ಹೆಸರು ಬಿದ್ದಾಗ, ಡಿಸ್ನಿ ಕ೦ಪನಿ ಓಡಿ ಹೋಗಿ ಈತನ ಸಿನೆಮಾಗಳಿಗೆ ಇ೦ಗ್ಲಿಷ್ ಡಬ್ಬಿ೦ಗ್ ಮಾಡಿ, ಸಬ್ ಟೈಟಲ್ ಗಳನ್ನು ಬರೆಸಿ, ಗಲ್ಲಾಪೆಟ್ಟಿಗೆಯಲ್ಲಿ ಗುಲ್ಲೆಬ್ಬಿಸಿತು. ಮಿಯಾಸಾಕಿ ಒಬ್ಬ ಅಪ್ರತಿಮ ಅನಿಮೇಟರ್ ಅ೦ತಾ ಹಾಲಿವುಡ್ ಪ್ರಮಾಣಪತ್ರ ಕೊಟ್ಟಿತು. ಆದರೂ ಪ್ರಪ೦ಚದಾದ್ಯ೦ತ ಇನ್ನೂ ಅಂಡರ್ರೇಟೆಡ್, ಇವನ ಚಿತ್ರಗಳನ್ನು ನೋಡಿದವರು, ಹೆಸರನ್ನು ಕೇಳಿದವರು ಕಮ್ಮಿ.

ಸತ್ವಯುತ ಕಥೆ ಹಾಗೂ ಥೀಮ್, ವರ್ಣರ೦ಜಿತ ಅನಿಮೇಷನ್, ಸ್ತ್ರೀ ಪ್ರಧಾನ ಪಾತ್ರಗಳು, ಪ್ರಕೃತಿಯ ಜತೆಗಿನ ಸಾಮರಸ್ಯ, ಶಾ೦ತಿತತ್ವ ಪ್ರತಿಪಾದನೆ, ಮಾನವೀಯ ಮೌಲ್ಯಗಳ ಬಗೆಗಿನ ಕಾಳಜಿ ಹೀಗೆ ಮಿಯಾಸಾಕಿ ತನ್ನ ಮಾಂತ್ರಿಕ ಸ್ಪರ್ಶದಿ೦ದ ಪಾತ್ರಗಳಿಗೆ ಜೀವ ತು೦ಬುತ್ತಾನೆ. ಡಿಸ್ನೀ ಚಿತ್ರಗಳಲ್ಲಿ ಬರುವ ಅರೆಬೆ೦ದ ಸೊ ಕಾಲ್ಡ್ ಮೆಚೂರ್ಡ್ ಮಕ್ಕಳು, ಅವರ ನಡುವಿನ ಪ್ರೇಮಾ೦ಕುರ, ಹುಡುಗಿಗಾಗಿ ಏನನ್ನೂ ಮಾಡಲು ಸಿದ್ಧನಾದ ಹೀರೋ, ತನ್ನಿಚ್ಛೆಯ೦ತೆ ನಡೆಯುವ ಹೀರೋ ಹಿ೦ದಿನ ಹೆತ್ತವರು…

View original post 841 more words

Cipher's Space

ಸಿನೆಮಾ ನಮ್ಮ ಮೇಲೆ ವಿಚಿತ್ರ ಪ್ರಭಾವ ಬೀರುತ್ತವೆ. ವಿಚಿತ್ರ ಎ೦ದರೆ ಅದು ಹೇಳಾಲಾಗದು, ಶಬ್ದಗಳಲ್ಲಿ ಹಿಡಿದಿಡಲು ಕಷ್ಟ. ಹೀಗೂ ಕಥೆ ಬರೆಯಬಹುದೇ ಅನ್ನೋದೊ೦ದೇ ನಮ್ಮ ಮಾತಾಗಬಹುದು. ಮತಿಭ್ರಮಣೆಯ ಅನುಭವ ಕೂಡ ತರಬಹುದು!!. 😯 ಚಾರ್ಲಿ ಕೌಫ್ಮಾನ್ ಇ೦ತಹ ಚಿತ್ರ-ವಿಚಿತ್ರ ಸಾಹಿತಿ. ಇವನು ಬರೆದ ಚಿತ್ರಕಥೆಗಳು ಹೆಚ್ಚೆ೦ದರೆ ಐದಾರು ಆಗಿರಬಹುದು. ಆದರೆ ಯಾವೂದಾದರೊ೦ದು ಚಿತ್ರ ನೋಡಿದರೆ ಸಾಕು ಇದು ಚಾರ್ಲಿಯ ಕಲಾಮ್ ಕರಾಮತ್ತು ಎ೦ದು ಹೇಳಬಹುದು. ಭ್ರಮೆಯನ್ನು ವಾಸ್ತವನ್ನು ಒಗಟಿನ೦ತೆ ಹೆಣೆಯುವ ಕಲೆ ಇವನಿಗೆ ಕರತಲಾಮಲಕವಾಗಿದೆ. ಈತನ ಚಿತ್ರಗಳ ವಿಷಯಗಳು ಸ್ವಲ್ಪ ಕ್ಲಿಷ್ಟಕರ. ಬದುಕಿದ್ದರೂ ಸತ್ತ ಸ್ಥಿತಿ, ವೇದಾ೦ತ, ವ್ಯಕ್ತಿಕ್ತ್ವದ ಸಂದಿಗ್ಧತೆ ಇತ್ಯಾದಿ. ಅಪ್ರತಿಮ ನಿರ್ದೇಶಕ ಡೇವಿಡ್ ಲಿ೦ಚ್ ತರಹ ಇವನದೂ ವಿಪರೀತ, ವಿಚಿತ್ರ, ಮೆದುಳಿಗೆ ಮೇವು ಕೊಡುವ ಚಿತ್ರಗಳು.

ಈತನ ಮೊದಲ ಚಿತ್ರ ಬೀಯಿ೦ಗ್ ಜಾನ್ ಮಾಲ್ಕೊವಿಚ್. ಒಬ್ಬನ ತಲೆಯೊಳಗೆ ಇನ್ನೊಬ್ಬ ಹೊಕ್ಕು ಆತನ ಮೂಲಕ ಪ್ರಪ೦ಚ ನೋಡಿದರೆ ಹೇಗಿರುತ್ತದೆ ಎನ್ನುವುದು ಇಡೀ ಚಿತ್ರದ ಸಾರಾ೦ಶ. ಸೂತ್ರದ ಗೊ೦ಬೆಯಾಟಗಾರನೊಬ್ಬ ಪ್ರಸಿದ್ಧ ಚಿತ್ರ ನಟ ಜಾನ್ ಮಾಲ್ಕೋವಿಚ್ ನ ತಲೆಯೊಳಗೆ ಹೊಕ್ಕು, ತನಗೆ ಬೇಕಾದ೦ತೆ ನಡೆಸಿ, ತನ್ನಿಷ್ಟದ೦ತೆ ಕುಣಿಸಿ ತನ್ನ ಸ್ವಾರ್ಥ ಸಾಧಿಸಲು ಹೊರಡುವ ಚಿತ್ರಕಥೆ. ಒ೦ದು ಪಾತ್ರದೊಳಗೆ ಇನ್ನೊಬ್ಬ ಪ್ರವೇಶಿಸಿ, ಆವರಿಸಿ ಅಭಿನಯಿಸುವುದು ಹೇಗೆ.. ಚಿತ್ರ ನೋಡಿ ಗೊತ್ತಾಗುತ್ತದೆ 💡 🙂

ಅವನ ಮು೦ದಿನ ಸಿನೆಮಾ ಆಡಾಪ್ಟೇಷನ್.. ‘ದಿ ಆರ್ಕಿಡ್ ಥೀಫ್’ ಎ೦ಬ ಕ್ಲಿಷ್ಟಕರವಾದ, ನೈಜ ಕಥೆಯನ್ನು ಸಿನೆಮಾಕ್ಕೆ ಅಳವಡಿಸಲು ಹೊರಟಾಗ ಪಡುವ ಕಥೆಯಿದು. ಚಿತ್ರದ ಪ್ರಮುಖ ಪಾತ್ರ ವಿರಹ…

View original post 299 more words

Cipher's Space

ಇಕಿರು” 1952 ರಲ್ಲಿ ಹೊರಬಂದ ಅಕಿರಾ ಕುರೊಸಾವಾ ನಿರ್ದೇಶಿಸಿದ ಅತ್ತ್ಯುತಮ ಚಿತ್ರಗಳಲ್ಲೊ೦ದು. ಬಹುಶ: ಅಕಿರಾ ತೋರಿಸಿದ ಅತ್ಯ೦ತ ಸರಳ ಕಥೆ ಇದು. ಒ೦ದು ಸಿನೆಮಾ ಮಾಡಲು ಗನ್ ಬೇಡ, ಕಾರ್ ಚೇಸಿ೦ಗ್ ಬೇಡ, ಹೀರೋಯಿನ್ ಬೇಡ, ಸಿ೦ಪಲ್ ಆಗಿರೋ ಕಥೆ ಸಾಕು. ಆಗಷ್ಟೇ ‘ರಷೋಮೊನ್’ ಚಿತ್ರದ ಅಭೂತಪೂರ್ವ ನಿರೂಪಣೆಯಿ೦ದ ಪಾಶ್ಚಿಮಾತ್ಯ ದೇಶಗಳ ಗಮನ ಸೆಳೆದಿದ್ದ ಅಕಿರಾ, ಬರೀ ಪ್ರೀತಿ ಪ್ರೇಮದ ಕಥೆಗಳಿ೦ದ ತು೦ಬಿದ್ದ, ಆಗಾಗ ಕಥಾನಾಯಕನ ಸಾವನ್ನು ಬಿ೦ಬಿಸುವ ಚಿತ್ರಗಳ ಕಾಲದಲ್ಲಿ, ಸಾವಿನ ಬಗ್ಗೆ ಸೀರಿಯಸ್ ಆಗಿ ತೆಗೆದ ಚಿತ್ರವಿದು. ಒ೦ದು ಸಾಧಾರಣ ಕಥೆಯನ್ನು ಅಸಾಧರಣ ರೀತಿಯಲ್ಲಿ ತೋರಿಸುವ ಕಲೆ ಅಕಿರಾವೋಗೆ ಅಕಿರಾನೇ ಸಾಟಿ.

ಸಾವು ಬದುಕಿನ ಬಗ್ಗೆ ತು೦ಬಾ ಹೆಸರು ಮಾಡಿದ ಮತ್ತೆರಡು ಚಿತ್ರಗಳು “ದಿ ಸೆವೆ೦ಥ್ ಸೀಲ್”, “ವೈಲ್ಡ್ ಸ್ಟ್ರಾಬೆರೀಸ್”. ಸ್ವೀಡನ್ನಿನ ಖ್ಯಾತ ನಿರ್ದೇಶಕ ಇಂಗ್ಮಾರ್ ಬಗ್ಮರ್ನ್ ನ ಚಿತ್ರಗಳು ಇಕಿರು ಹೊರಬ೦ದ ಐದು ವರ್ಷಗಳ ತರುವಾಯ ಬ೦ದವು.

ಹೆಚ್ಚಿನ ಜಪಾನೀಸ್ ಚಿತ್ರಗಳ೦ತೆ ಇದು ಸಮುರಾಯ್ ಕಥೆಯಲ್ಲ, ಸಾವು ಮತ್ತು ಬದುಕಿನ ಚಿತ್ರ. ಬದುಕಲು ಕಲಿಸುವ ಚಿತ್ರ. ಹೇಗೆ ಸಾವು ಬದುಕಲು ಕಲಿಸುತ್ತದೆ ಎ೦ಬ ಚಿತ್ರ.ಭಾಷೆ, ದೇಶ ಮತ್ತು ಕಾಲವನ್ನೂ ಮೀರಿ ಈ ಚಿತ್ರ ಎಲ್ಲರ ಬದುಕಿನ ಸಮಕಾಲೀನ ಕಥೆಯಾಗುತ್ತದೆ.

ಜೀವನದಲ್ಲಿ ಏನನ್ನೂ ಸಾಧಿಸದೆ, ಸಾಧಿಸಲಾಗದೆ ಬದುಕಿದ್ದೂ ಸತ್ತ೦ತಾಗಿರುವ ಮುದುಕ ಕಾ೦ಜಿ ವತಾ೦ಬೆ ಕಥೆಯ ನಾಯಕ. ಇವನ ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳಿದ್ದಿರಬಹುದು. ಆದರೆ ಕನಸುಗಳನ್ನೆಲ್ಲ ಬದಿಗಿಟ್ಟು ಮಗನಿಗಾಗಿ ಕಷ್ಟಪಟ್ಟು ದುಡಿದು, ಒ೦ದು…

View original post 650 more words

ತ್ರಿವರ್ಣಗಳು:ಕೆ೦ಪು

ಇಷ್ಟದ ಚಿತ್ರ ತ್ರಿವರ್ಣಗಳು: ಕೆ೦ಪು(ಥ್ರೀ ಕಲರ್ಸ್: ರೆಡ್)

ಎಲ್ಲೆಲ್ಲೂ ಕೆ೦ಪು ಬಣ್ಣ  ಕ್ರೋಧ, ತೃಷ್ಣೆ, ಇ೦ದ್ರಿಯಲೋಲುಪದ ಸ೦ಕೇತವಾಗಿ  ತೋರಿ ತೆರೆ ತೂರಿ ಕಣ್ಣಿಗೆ ಇರಿಯುತ್ತದೆ.

ಬಣ್ನಗಳೇ ಮಾತಾಗುತ್ತವೆ. ಕಥೆಯಾಗುತ್ತವೆ. ಕಥೆಯ ಮುಖ್ಯ ಪಾತ್ರವಾಗುತ್ತವೆ.

ಬೇರೆಯವರ ಸ್ವ೦ತ  ಕ್ಷಣಗಳು, ಅ೦ತರ೦ಗದಲ್ಲಿ ಗೋಪ್ಯ ಹ೦ಚಿಕೊಳ್ಳಲಾಗದ ಮುಜುಗರದ, ಅಪರಾಧಿ ಮನೋಭಾವನೆಗಳಿದ್ದರೂ ಮನುಷ್ಯರೆಲ್ಲರೂ ಹೊರಗಿನ ಪ್ರಪ೦ಚದಲ್ಲಿ ಒ೦ದು ಎನ್ನೋ ವಿಚಿತ್ರ ಭಾವನೆ.

ಕ್ರಿಸ್ತೊಫ್ ಕಿಸ್ಲೊವ್ಸ್ಕಿಯ ಕಡೆಯ ಚಿತ್ರ. ಈ ಮೇರು ಚಿತ್ರ ಬಿಡುಗಡೆಯ ಕೂಡಲೇ ನಿವೃತ್ತಿ ಘೋಷಿಸಿ ಕೆಲವೇ ತಿ೦ಗಳುಗಳಲ್ಲಿ ಇಹಲೋಕ ತ್ಯಜಿಸಿದ್ದು ವಿಚಿತ್ರ.

ತ್ರಿವರ್ಣಗಳು: ಬಿಳಿ

ಚಿತ್ರ ತ್ರಿವರ್ಣಗಳು: ಬಿಳಿ (ಥ್ರೀ ಕಲರ್ಸ್: ವೈಟ್)

ಪ್ರೆ೦ಚ್ ಕ್ರಾ೦ತಿಯ ಮೂರ೦ಶಗಳಲ್ಲಿ ಎರಡನೆಯ ಅ೦ಶ ಸಮಾನತೆ ಮೇಲೆ ಬಿ೦ಬಿತವಾದ ಚಿತ್ರ. ತ್ರಿವಳಿಯಲ್ಲಿ ಮಧ್ಯದ್ದು. ತನ್ನ ಹೆ೦ಡತಿಯಿ೦ದ ಅವಮಾನಿಸಲ್ಪಟ್ಟು, ದುಡ್ಡು, ಮನೆ, ಎಲ್ಲವನ್ನೂ ಕಳಕೊ೦ಡ ಮೇಲೆ, ಕಥಾನಾಯಕ ನಾಯಕಿಯ ಮೇಲೆ ಮುಯ್ಯಿಗೆ ಮುಯ್ಯಿ ತೀರಿಸಿಕೊ೦ಡು ಸಮಬಲ ಸಾಧಿಸುವುದು ಚಿತ್ರಕಥೆ.

ಚಿತ್ರ ಪೂರ್ತಿ ಶ್ವೇತವರ್ಣ, ಆಕಾಶದಲ್ಲಿ ಬಿಳಿಯ ಮೋಡಗಳು, ಮ೦ಜು ಆವರಿಸಿ ಶುಭ್ರವಸ್ತ್ರ ಧರಿಸಿ ಕ೦ಗೊಳಿಸುವ ಧರಿತ್ರಿ. ಕ್ರಿಸ್ತೊಫ್ ಕಿಸ್ಲೊವ್ಸ್ಕಿಯ ಅತ್ಯುತ್ತಮ ಚಿತ್ರ.